Thursday, November 14, 2013


ಮಗಳು ತುಂಬಾ ಜೋರಾಗಿದ್ದಾಳೆ. ಎಲ್ಲದಕ್ಕೂ ಲೆಕ್ಕಾಚಾರ. ಎಲ್ಲರೂ ತನ್ನ ಸುತ್ತ ಸುತ್ತಬೇಕು ಎನ್ನುವ ಆಸೆ.

ಹೋದ ವಾರವಷ್ಟೆ ರಾಜಸ್ಥಾನದಿಂದ ತಂದ ಬಟ್ಟೆಯನ್ನು ಹಾಕಿಕೊಂಡೆ. ತಕ್ಷಣ ಒಂದು dialogue ಬಂತು. "ನೀನು ಮಾತ್ರ ನಿನಗೆ ಬೇಕಾದ dress ತಗೊಂಡು ಬಾ tour ಇಂದ, ನನಗೆ ಮಾತ್ರ ಒಂದು ಜೊತೆ ಲಂಗ ಬ್ಲೌಸು ತಂದು ಬಿಡು ಸಾಕು" ಎಂದು. ಇದಿಷ್ಟು ಕೇಳಿಯೂ ನಾನು ಎಲ್ಲದರ ಜೊತೆ ಹೊಸ ಚಪ್ಪಲಿಯನ್ನೂ ಹಾಕಿ ಹೊರಟೆ. ಅದನ್ನು ನೋಡಿ ಇನ್ನೂ ಮುಖ ಊದಿಹೊಯಿತು.

ಮತ್ತೊಂದು ದಿನ ನನ್ನ ಹಾಗೂ ಅವಳ ಅಪ್ಪನ ಮೇಲೆ ಕೂಗಾಡಿದ್ದಳು- "ಅಂಗಡಿಗೆ ಹೋದರೆ ಯಾವಾಗಲೂ ಅಮ್ಮನ ಅಡಿಗೆ ಸಾಮಾನು ತೆಗೆದುಕೊಂಡು ಬರ್ತೀಯಾ ನನ್ನ ಅಡಿಗೆ ಆಟಕ್ಕೆ ಯಾವ ಸಾಮಾನು ಕೊಡಿಸುವುದಿಲ್ಲ" ಎಂದು. ಅದೇ ಸಿಟ್ಟನ್ನು ಮುಂದುವರಿಸಿ- "ನನ್ನ ಮೇಲೆ ನಿಮಗೆ ಕಾಳಜಿ ಇಲ್ಲ, ನನ್ನನ್ನು ಅಮ್ಮಮ್ಮನ ಮನೆಗೆ ಬಿಟ್ಟು ನೀವಿಬ್ಬರೂ tour ಗೆ ಹೋಗಿ ಮಜಾ ಮಾಡಿ ಬರ್ತೀರಾ" ಅಂತ ಮೊಸಳೆ ಕಣ್ಣೀರು ಸುರುಸಿದಳು.

ಅವಳ ಮುಂದೆ ಏನು ಮಾಡೋದು ಅಥವಾ ಮಾತಾಡೋದು ಇದ್ಧರೂ ಹತ್ತು ಸಲ ಯೋಚನೆ ಮಾಡಿ ಮಾಡಬೇಕು.

ಕಿವಿಯಂತು ಎಲ್ಲಾ ದಿಕ್ಕಿಗೂ ಹಬ್ಬಿರುತ್ತದೆ.
ಸಧ್ಯಕ್ಕಂತೂ ನಾವು ಅವಳನ್ನು tour ಗೆ ಬಿಟ್ಟು ಹೋದ ವಿಷಯಕ್ಕಾಗಿ ಬೇಕಾದಷ್ಟು emotional blackmail ಮಾಡುತ್ತಿದ್ದಾಳೆ:)